• Sign up
  • ‎What is Shvoong?‎
  • Sign In
    Sign In
    Remember my username Forgot your password?

Summaries and Short Reviews

.

Shvoong Home>Books>As I Look Back Summary

.

As I Look Back

Book Review by: shailaja123    

Original Author: G Raghava Reddy IPS Retd
As I LOOK BACK
ನಾನು ಹಿಂದಿರುಗಿ ನೋಡಿದಾಗ- ಪೋಲೀಸ್ ಅಧಿಕಾರಿಯ ನೆನಪುಗಳು
ಈ ಪುಸ್ತಕ ಹಿರಿಯ, ನಿವೄತ್ತ, ಉಛ್ಛ ಪೋಲೀಸ್ ಅಧಿಕಾರಿಯ
ನೆನಪುಗಳು .ಶ್ರ‍ೀಯುತ ಜಿ.ರಾಘವ ರೆಡ್ಡಿಯವರು ನಿವೃತ್ತ ಐ.ಪಿ.ಎಸ್ ಅಧಿಕಾರಿ.ಇವರು ಪ್ರಮುಖ ಹಾಗು ಕ್ಲಿಷ್ಟ ಮೊಕದ್ದಮೆಗಳನ್ನು ಬಗೆಹರಿಸಿದ ಹೆಗ್ಗಳಿಕೆಯನ್ನು ಹೊಂದಿದವರು.
ಅವರು ಅಪರಾಧ ಶೋಧನೆಯಲ್ಲಿ ಬಹಳ ತಜ್ಞರೆಂದು ಗುರುತಿಸಲ್ಪಟ್ಟಿದ್ದಾರೆ.ಶ್ರೀಯುತ ರೆಡ್ಡಿಯವರು ನಕ್ಸಲೀಯ ಚಳವಳಿಯಲ್ಲೂ ಬಹಳ ಆಳವಾಗಿ ಅಧ್ಯಯನ ಮಾಡಿ ತಿಳುವಳಿಕೆಯುಳ್ಳವರು.ನಕ್ಸಲೀಯ ಚಳವಳಿಯು ಆಯುಧಗಳನ್ನು ಬಳಸಿ ದೇಶ,ಸರಕಾರ ವ್ಯವಸ್ಥೆಯ ವಿರುದ್ಧ ಹೋರಾಡುವ ಒಂದು ವಿಧಾನ,ಪ್ರಸ್ತುತ ನಮ್ಮ ದೇಶಕ್ಕಿರುವ ವಿಪತ್ತು.
ಈ ಪುಸ್ತಕ " As I LOOK BACK " ವಿಶಿಷ್ಟ ಪೋಲೀಸ್ ಅಧಿಕಾರಿಯೊಬ್ಬನ ಜೀವನ ನಡೆದುಬಂದ ಹಾದಿಯನ್ನು ಹಾಗು ಆತನ ಅಧಿಕಾರದಲ್ಲಿದ್ದಂದಿನ ಏರಿಳಿತವನ್ನು ಹೇಳುತ್ತದೆ.ಈತ ಚಿಕ್ಕ ಆರು ವರ್ಷ ಪ್ರಾಯದ ಬಾಲಕನಿದ್ದಾಗ
ಸ್ವತಃ ಮಹಾತ್ಮ ಗಾಂಧಿಯವರಿಂದಲೇ "ಹರಿಜನ ವಸತಿಗೃಹ" ದಲ್ಲಿ ಇರಲು ಮೇಲಿನ ಜಾತಿಯ ಹುಡುಗನಾಗಿ ಆರಿಸಲ್ಪಟ್ಟನು.ಈ ಒಂದು ಮಹತ್ತರ ಘಟನೆಯಿಂದಾಗಿ ಬಾಲಕನ ಆಂತರ್ಯದಲ್ಲಿ ಬಂದ ಬದಲಾವಣೆಯು ಆಗಿನ ಭಾರತ ದೇಶದ ದಲಿತ,ದಬ್ಬಾಳಿಕೆಗೊಳಗಾದ ,ಬಲಹೀನ ವರ್ಗದವರನ್ನು ಅರ್ಥೈಸಿಕೊಳ್ಳಲು ಸಹಾಯವಾಯಿತು.ಲೇಖಕರು ಆಗಿನ ಕೊನೆಯ ಹೈದರಾಬಾದ್ ಪೋಲೀಸ್ ಸೇವೆಗೆ ಆಯ್ಕೆಯಾದ ದಳದವರು.ಆ ನಂತರದ ಕೆಲವು ತಿಂಗಳೊಳಗೆ ಅವರು ಆಂಧ್ರ ಪ್ರದೇಶ ಪೋಲೀಸ್ ಸೇವೆಗೆ ಸೇರಿದರು.
ಟಿ.ನಾಗಿರೆಡ್ಡಿ ಸಂಚಿನ ಮೊಕದ್ದಮೆ ಅಥವ ಕಮ್ಯುನಿಸ್ಟ್ ಸಂಚಿನ ಮೊಕದ್ದಮೆ ೧೯೬೯
ತರಿಮೆಲ್ಲ ನಾಗಿರೆಡ್ಡಿಯವರು ಹೆಸರಾಂತ ಎಲ್ಲರಿಂದ ಗುರುತಿಸಲ್ಪಟ್ಟ ರಾಜಕಾರಿಣಿ, ನಕ್ಸಲೀಯ ಚಳವಳಿಯ ನಾಯಕ ಹಾಗೂ ದುರೀಣ.ಅವರು ಅವರ ಇನ್ನಿತರ ೨೨ ಮಂದಿ ಸಹಚಾರಿಗಳೊಂದಿಗೆ ಪ್ರಭುತ್ವದ ವಿರುದ್ಧ ಯುದ್ಧ ನಡೆಸುವ ಸಂಚಿನ ತಯಾರಿಯಲ್ಲಿದ್ದಾಗ ಸಿಕ್ಕಿಹಾಕಿಕೊಂಡರು.ಈ ಗುಂಪಿನ ಮಂದಿ ಜನಸಾಮಾನ್ಯರಿಗೆ ಹಾಗೂ ಆಸ್ತಿ, ಸೊತ್ತುಗಳಿಗೆ ಗುರುತರವಾಗಿ ಹಾನಿಮಾಡಲು ಬೇಕಾದ ಶಕ್ತಿ ಮತ್ತು ಆಯುಧಗಳನ್ನು ಹೊಂದಿದ್ದರು.ಈ ಗುಂಪು ಆಗಲೇ ಆಂದ್ರ ಪ್ರದೇಶದಲ್ಲಿ ಬಹಳ ಹಾನಿ ಮಾಡಿದ್ದಿತು. ಶ್ರೀಯುತ ರೆಡ್ಡಿಯವರು ಈ ಮೇಲಿನ ಮೊಕದ್ದಮೆಯ ಮುಖ್ಯ ತನಿಖಾಧಿಕಾರಿ.ಇದು ಬೄಹದ್ಗಾತ್ರದ ಮೊಕದ್ದಮೆ, ಇದರಲ್ಲಿ ೩೨೫ ಮಂದಿ ಸಾಕ್ಷಿಗಳು ಪಾಲ್ಗೊಂಡಿದ್ದರು.ಇದಕ್ಕೆ ೯೦೦ಕ್ಕೂ ಮಿಕ್ಕಿದ ಪುಟಗಳ ಬರಹ ರೂಪದ ದಾಖಲೆಯಿದೆ. ಕೊನೆಯಲ್ಲಿ ಎಲ್ಲಾ ಆಪಾದಿತರು ಬೇರೆ ಬೇರೆ ನ್ಯಾಯಾಲಯಗಳಲ್ಲಿ ಶಿಕ್ಷೆಗೊಳಗಾದರು.
ಶ್ರೀ ರಾಘವ ರೆಡ್ಡಿಯವರು ಆಂಧ್ರ ಪ್ರದೇಶ ಪೋಲೀಸ್ ಗುಪ್ತಚರ ದಳವನ್ನು ಕೂಡಾ ನಡೆಸಿದ್ದಾರೆ. ಅವರಿಗೆ ಭಾರತ ಸರ್ಕಾರದ ಗೌರವದ ಸಂಕೇತವಾದ ಇಂಡಿಯನ್ ಪೋಲೀಸ್ ಮೆಡಲ್ ಮತ್ತು ದೇಶದ ರಾಷ್ಟ್ರಪತಿಯವರ ಪ್ರೆಸಿಡೆಂಟ್ ಗೋಲ್ಡ್ ಮೆಡಲ್ ಅನ್ನು ಅವರ ವಿಶಿಷ್ಟ ಸೇವೆಗಾಗಿ ನೀಡಲಾಯಿತು.
ಅವರು ೧೯೮೬ನೇ ಇಸವಿಯಲ್ಲಿ ಡಿ.ಐ.ಜಿ.ಯಾಗಿ ನಿವೃತ್ತರಾದರೂ ಪೋಲೀಸ್ ಶಿಕ್ಷಣವನ್ನು,ತರಬೇತಿಯನ್ನು ಕೊಡುವ ವಿವಿಧ ಸರಕಾರದ ಸಂಸ್ಥೆಗಳಲ್ಲಿ ಕಲಿಸುತ್ತಾರೆ, ಬೇರೆ ಬೇರೆ ವಿಷಯಗಳ ಮೇಲೆ ಸಲಹೆ ಕೊಡುತ್ತಾರೆ.
ರಾಘವರೆಡ್ಡಿಯವರು ಕೃಷಿಕನಾಗಿ :
ಅವರು ತಮ್ಮ ಪೋಲೀಸ್ ವೃತ್ತಿಯಿಂದ ನಿವೃತ್ತರಾದಾಗ ಪೂರ್ತಿಯಾಗಿ ಕೃಷಿಪರರಾದರು.ಅವರು ಆಧುನಿಕ ಕೃಷಿಪದ್ಧತಿಗಳನ್ನು ಅಧ್ಯಯನ ಮಾಡಿ, ನೀರಿಲ್ಲದ ಒಣ ಭೂಮಿಯಲ್ಲಿ ಆ ಪದ್ಧತಿಯಲ್ಲಿ ಬಹಳಷ್ಟು ಯಶಸ್ವೀ ಪ್ರಯೋಗಗಳನ್ನು ಮಾಡಿ,ಕೃಷಿಕರಿಗೆ ಆದರ್ಶಪ್ರಾಯರಾದರು, ಅವರ ಆ ತೋಟ ಹಸಿರಾಗಿ ಕಂಗೊಳಿಸುತ್ತದೆ. ಇದನ್ನು ಬಹಳಷ್ಟು ವಾರ್ತಾ ದೈನಿಕಗಳು,ಕೃಷಿ ಪತ್ರಿಕೆಗಳು ಲೇಖನ ಪ್ರಕಟಿಸಿ ಉಲ್ಲೇಖಿಸಿದೆ,ಬಹಳ ಮಂದಿ ತಜ್ಞರು ಮತ್ತು ಪರಿಣತರು ಎನ್ ಐ ಆರ್ ಡಿ, ಎ ಎನ್ ಜಿ ಆರ್ ಯು ಮೊದಲಾದ ಸಂಸ್ಥೆಗಳ ಮಂದಿ ಇವರ ತೋಟ ಆರ್ ಕೆ ಫಾರ್ಮ್ ಅನ್ನು ಶ್ಲಾಘನೆ ಮಾಡಿದ್ದಾರೆ.
ಗ್ರಂಥ ವಿವರಣೆ ಪಟ್ಟಿ : As I LOOK BACK ಲೇಖಕರು ಜಿ.ರಾಘವ ರೆಡ್ಡಿ (ಐ.ಪಿ.ಎಸ್.) 
Published: July 11, 2009
Please Rate this Review : 1 2 3 4 5

Bookmark & share this post

Read best seller reviews

.